Saturday, April 23, 2011

ಪ್ರೇಮ

ಸೂರ್ಯ ರಶ್ಮಿಯ ಸ್ಪರ್ಶಕೆ ಅರಳುವ ಕಮಲದಂತೆ
ಹೃದಯದಲ್ಲಿ ಅರಳುವುದು ಪ್ರೇಮ,
ಅಮರ ಮಧುರ ಪ್ರೇಮ.

ಹೂವಿನಂತ ಹೃದಯಕ್ಕೆ ಸಿಹಿ ಜೇನ ಸುಧೆ ಪ್ರೇಮ
ಕೋಗಿಲೆಯ ಇಂಚರದಂತೆ ಮಾಧುರ್ಯ ಪ್ರೇಮ.

ಪ್ರೇಮದ ಪರಿಯ ಬಣ್ಣಿಸಲು ಪದಗಳೆಲ್ಲಿ?
ಪ್ರೇಮಿಗಳಿಗೆ ಕಾಲದ ಪರಿವೆ ಎಲ್ಲಿ?
ಪ್ರೇಮಭರಿತ ಹೃದಯ ನಿತ್ಯ ಸುಂದರ
ಬದುಕು ಬೆಳದಿಂಗಳ ಆಗರ.

ಅರಿತು ಬೆರೆತು ಜೀವಿಸಲು
ಜೊತೆಯಾಗಲಿ ಪ್ರೇಮ
ನೀಲಾಕಾಶದ ಅನಂತತೆಯಂತೆ
ಇರಲಿ ಅನುದಿನ ಪ್ರೇಮ
ಸದಾನುರಾಗದಿಂದ ಬದುಕಾಗಲಿ
ಸುಮಧುರ ಸಮಾಗಮ.

ನನ್ನ ಮನಸಿನ ಮಾತು

ನೀ ನನ್ನವನೆಂದು ನಾನಂದುಕೊಂಡರೆ ಸಾಕಾಗುವುದೇ
ನೀ ನನ್ನವನೆಂದು ಸವಿಯಾಗಿ ಹೇಳಿದರೆ ಸಾಕಾಗುವುದೇ
ನನ್ನವನೆಂದು ನಿತ್ಯ ಜೊತೆಗಿರುವುದೇ
ಜೊತೆ ಕನಸು ಕಾಣುವುದೇ
ಮಾತಲ್ಲಿ ಮಾತಾಡುವುದೇ
ಏನದು ‘ನನ್ನವನ ’ ಅಂತರಾಳ

ಎದೆಯ ಗೂಡಲ್ಲಿ ಬಚ್ಚಿಡುವ ಆಸೆ ಅರಿಯುವುದೇ
ಹೃದಯಾಳದಲಿ ಮುಚ್ಚಿಟ್ಟ ಭಾವನೆಗಳ ಮಿಡಿವುದೇ
ನನ್ನವನೆಂಬುದು ನರನಾಡಿ ಬೆರೆಯುವುದೇ
ಅನಿಸಿಕೆಗಳಿಗೆ ಸ್ಪಂದಿಸುವುದೇ
ಮನದ ಮೌನ ಕೇಳುವುದೇ
ಏನದು ‘ನನ್ನವನ ’ ಅಂತರಾಳ

ಗಾಳಿಗೂ ಹಕ್ಕಿಗಿರುವ ಬಾಂಧವ್ಯ, ಹೊತ್ತು ಹಾರಿಸುದೇ
ನೀರಿಗೂ ಮೀನಿಗಿರುವ ನಂಟು, ಸರಾಗವಾಗಿ ಈಜಿಸುದೇ
ನನ್ನವನೆಂಬುದು ಅಗಲಿರಲಾದುದೇ
ನಿರರ್ಗಳ ದಾರಿಯಾಗುವುದೇ
ಬಹಿರಂಗ ಅಂತರಂಗಿಸುವುದೇ
ಏನದು ‘ನನ್ನವನ ಅಂತರಾಳ

ವಚನ ಗಮನ ತಪನಗಳ ಸಮನಾಗಿರಿಸುವುದೇ
ತೃಪ್ತಿ ಆಸಕ್ತಿ ಸ್ಫೂರ್ತಿಗಳ ಸಮ್ಮಿಶ್ರವಾಗಿರುವುದೇ
ನನ್ನವನೆಂಬುದು ಸಮಸ್ತ ಏಕವಾಗುವುದೇ
ನನ್ನವನ ನನ್ನಂತೆಯಾಗಿರುವುದೇ
ನನ್ನೊಳಗೆಯೇ ನಾನಾಗಿರುವುದೇ
ಏನದು ‘ನನ್ನವನ ’ ಅಂತರಾಳ

ನಾನಾಗಲೇ ಗೆಳತಿ

ನಿನ್ನ ಮಲ್ಲಿಗೆಯ ಮೈಯ ಸುಡುವ
ಸೂರ್ಯನಾ ತಡೆವ ಬಿಳಿಮೋಡ
ನಾನಾಗಲೇ ಗೆಳತಿ ನಾನಾಗಲೇ

ಕೊರೆವ ಚಳಿಗೆ ನಡುಗುವ ನಿನ್ನ ಮೈಗೆ
ಬೆಚ್ಚನೆಯಾ ಮೃದು ಹೊದಿಕೆ
ನಾನಾಗಲೇ ಗೆಳತಿ ನಾನಾಗಲೇ

ಸುರಿವ ಮಳೆಗೆ ನೆನೆವ ನಿನ್ನ ಮೈಗೆ
ಅಡ್ಡಳಾಗಿ ನಿಲ್ವ ಚಾವಣಿ
ನಾನಾಗಲೇ ಗೆಳತಿ ನಾನಾಗಲೇ

ಮುಂಜಾನೆಯ ಹಕ್ಕಿಗಳ ಚಿಲಿಪಿಲಿ
ಕೇಳಿ ನಲಿವ ನಿನ್ನ ಕಿವಿಗಳು
ನಾನಾಗಲೇ ಗೆಳತಿ ನಾನಾಗಲೇ

ಗೋಧೂಳಿಯ ಹೊತ್ತಿನಲಿ ಮುಸ್ಸಂಜೆ ಸೂರ್ಯನನ್ನು
ನೋಡಿ ನಲಿವ ನಿನ್ನ ಕಂಗಳು
ನಾನಾಗಲೇ ಗೆಳತಿ ನಾನಾಗಲೇ

ಕೊನೆ ಘಳಿಗೆವರೆಗೂ ಪ್ರತಿ ಘಳಿಗೆಯಲ್ಲೂ
ನಿನ್ನೊಂದಿಗಿರುವಾ ಬಿಸಿಯುಸಿರು
ನಾನಾಗಲೇ ಗೆಳತಿ ನಾನಾಗಲೇ

ಏನಾಗಲಿ, ಏನಾಗದಿರಲೀ
ನಿನ್ನ ಕೈಪಿಡಿದು ಸಂಗಾತಿಯಾಗುವ ಸೌಭಾಗ್ಯ
ನನ್ನದಾಗಲೀ ಗೆಳತಿ ನನ್ನದಾಗಲಿ

ತ್ರಾಣವಿಲ್ಲದಾ ನಿನ್ನ ಕಾಲ್ಗಳ ಚೈತನ್ಯದಾ ಹೆಜ್ಜೆಗಳು
ನನ್ನದಾಗಲೀ ಗೆಳತಿ ನನ್ನದಾಗಲಿ
ನೆನಪು
ಮೊಬ್ಬು ಮು೦ಜಾವಲ್ಲಿ
ಕೆ೦ಗುಲಾಬಿಯ ಶೃ೦ಗರಿಸಿದ
ಇಬ್ಬನಿ, ಎದೆಯಾಳ ಹೊಕ್ಕು,
ನಿನ್ನ ನೆನಪ ಹೊತ್ತು,
ಕ೦ಬನಿಯಾಗಿ ಇಳಿದುಹೋಯ್ತು.

ಸುಡುಬಿಸಿಲ ಧಗೆಯಲ್ಲಿ,
ಬೆ೦ದು ಬಳಲಿದ ಕಣ್ಣ ರೆಪ್ಪೆ,
ದಣಿದಿಹೆನೆ೦ಬ ನೆಪದಲ್ಲಿ,
ಕಣ್ಮುಚ್ಚಿ, ನೋವ ಅಡಗಿಸಿರಲು,
ಜೊತೆ ನಾನಿರುವೆ ಎ೦ದ
ಕಣ್ಣಾಲಿಗಳು ತು೦ಬಿಕೊ೦ಡವು.

ಬೀಳ್ಕೊಡುಗೆಗೆ೦ದೇ ಶೃ೦ಗರಿಸಿದ,
ಕೆಮ್ಮುಗಿಲ ತುತ್ತತುದಿಯಲ್ಲಿ,
ಹೊರಡಲಣಿಯಾಗಿ ನಿ೦ತ ಸೂರ್ಯನೊಳು
ಸ್ಪರ್ಧೆಗಿಳಿದ ಕಣ್ಣು, ತಾನೇ ಕೆ೦ಪೆ೦ದು
ಕಣ್ಣೀರ ಸಾಗರದಿ ಮುಳುಗಿಹೋಯ್ತು.....

Friday, April 15, 2011

ಓಡಾಟ

ಕಂಬಿ ಮೇಲೆ ರೈಲು
ಲಂಚದ ಮೇಲೆ ಫೈಲು
ಕರನ್ಸಿ ಮೇಲೆ MOBILEU

Friday, April 8, 2011

ಬನ್ನಿ, ಅಣ್ಣಾ ಹಜಾರೆಯನ್ನು ಬೆಂಬಲಿಸೋಣ...

ಈ ದೇಶದ ದುರಂತ ನೋಡಿ. ಕಳೆದ 35 ವರ್ಷಗಳಿಂದ ಮನೆ ಮಠ ತೊರೆದು, ಯಾವುದೇ ಅಧಿಕಾರ ದಾಹವಿಲ್ಲದೆ, ನಿಸ್ವಾರ್ಥವಾಗಿ ಜನರ ಪರವಾಗಿ ಹೋರಾಟ ಮಾಡುತ್ತಿರುವ ಗಾಂಧಿವಾದಿ, ಹಣ್ಣು ಹಣ್ಣು ಮುದುಕರೊಬ್ಬರು, ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿ, ನ್ಯಾಯ ಬೇಕು ಎಂದು ಗಾಂಧಿ ಹಾಕಿಕೊಟ್ಟ ಅಹಿಂಸಾ ಮಾರ್ಗ - ಉಪವಾಸ ಮಾಡುತ್ತೇನೆಂದು ಕೂತರೆ, ನಮ್ಮನ್ನು ಆಳುವ ಮಹಾನ್ ನಾಯಕರು ಅಂಥವರ ಹಿಂದೆ ಆರೆಸ್ಸೆಸ್ ಕೈವಾಡ, ಸಂಘ ಪರಿವಾರದ ಸಂಚು ಇದೆ, ದೇಶವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದೆಲ್ಲಾ ಬಾಯಿಗೆ ಬಂದಂತೆ ಹೇಳುತ್ತಿದ್ದಾರೆ!

ಮಹಾರಾಷ್ಟ್ರದಲ್ಲಿ ಆಳುತ್ತಿದ್ದ ಸರಕಾರಗಳನ್ನೆಲ್ಲಾ ಗಡಗಡ ನಡುಗಿಸಿದ್ದ, ಇದೇ ಕೇಂದ್ರ ಕೃಷಿ ಮಂತ್ರಿ ಶರದ್ ಪವಾರ್ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಸರಕಾರಿ ಮಟ್ಟದ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾ ಹೆಸರು ಮಾಡಿದವರು ಅಣ್ಣಾ ಹಜಾರೆ. ಇದೀಗ 3 ದಶಕಗಳಿಂದ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಲೇ ಕೇಂದ್ರದಲ್ಲಿ ದೊಡ್ಡ ದೊಡ್ಡ, ಪ್ರಭಾವೀ ಮಂತ್ರಿ ಪಟ್ಟ ಗಿಟ್ಟಿಸಿಕೊಂಡಿದ್ದಾರೆ ಶರದ್ ಪವಾರ್. ಆದರೋ, ಅಣ್ಣಾ ಹಜಾರೆಯಂತೂ ಭ್ರಷ್ಟಾಚಾರ ವಿರುದ್ಧ ಇನ್ನೂ ಹೋರಾಡುತ್ತಲೇ ಇದ್ದಾರೆ! ಇದು ವಿಪರ್ಯಾಸ.

ಓದಿದ್ದು 7ನೇ ಕ್ಲಾಸು, ಸೇನೆಯಲ್ಲಿ ಚಾಲಕ...
1940ರ ಜನವರಿ 15ರಂದು ಬಡ ಕುಟುಂಬದಲ್ಲಿ ಜನಿಸಿದ ಹಜಾರೆ ಓದನ್ನು ಕೇವಲ 7ನೇ ತರಗತಿಗೇ ನಿಲ್ಲಿಸಬೇಕಾಗಿತ್ತು. ಆದರೂ, ಭಾರತೀಯ ಸೇನೆಯನ್ನು ಸೇರಿ, ಚಾಲಕನಾಗಿ ಕಾಲ ಕಳೆದಿದ್ದ ಅವರಿಗೆ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಮತ್ತು ಆಚಾರ್ಯ ವಿನೋಬಾ ಭಾವೆ ಆದರ್ಶ.ಇಂಡೋ-ಪಾಕ್ ಯುದ್ಧದಲ್ಲಿ ತಂಡದ ಮೇಲೆ ದಾಳಿ ನಡೆದಾಗ ಅಲ್ಲಿ ಬದುಕುಳಿದ ಶಿಸ್ತಿನ ಸಿಪಾಯಿ ಅವರು. ಅಂದಿನ ಈ ದುರಂತವು ಅವರ ಜೀವನದ ಚರ್ಯೆಯನ್ನೇ ಬದಲಿಸಿತು. ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ಜನರ ಜೀವನದ ಬಗೆಗೆ .ಯೋಚಿಸತೊಡಗಿದರು ಅವರು.

ಖಾದಿ ಬಟ್ಟೆ ಮಾತ್ರವೇ ಧರಿಸುತ್ತಿರುವ ಅವರಿಗೆ ಕುಟುಂಬವಾಗಲೀ, ಆಸ್ತಿಪಾಸ್ತಿಯಾಗಲೀ ಏನೂ ಇಲ್ಲ. ರಾಲೆಗಣ ಸಿದ್ಧಿಯ ಯಾದವಬಾಬಾ ಮಂದಿರ ಆತಕೊಂಡಿರುವ 100 ಚದರಡಿಯ ಒಂದು ಪುಟ್ಟ ಕೊಠಡಿಯಲ್ಲಿ ಅವರ ವಾಸ. ಅವರಿಗೆ ಇಬ್ಬರು ವಿವಾಹಿತ ಸಹೋದರಿಯರಿದ್ದಾರೆ. ಅವರ ತಾಯಿ 2002ರಲ್ಲಿ ತೀರಿಕೊಂಡಿದ್ದರು. ಆದರೆ ರಾಲೆಗಣ ಸಿದ್ಧಿಯ ತಮ್ಮ ಕೌಟುಂಬಿಕ ಮನೆಗೆ ಅವರು ಯಾವತ್ತೂ ಕಳೆದ 35 ವರ್ಷಗಳಿಂದ ಭೇಟಿ ಕೊಟ್ಟಿಲ್ಲ, ಸಹೋದರಿಯರನ್ನೂ ಭೇಟಿಯಾಗಿಲ್ಲ. ತಮ್ಮನ್ನು ಭೇಟಿಯಾದವರಲ್ಲಿ ಐದೋ ಹತ್ತೋ ರೂಪಾಯಿ ಕೊಡಿ ಎನ್ನುತ್ತಾ ಜೀವನ ಸಾಗಿಸುತ್ತಿದ್ದಾರೆ.

ಮಾಹಿತಿ ಹಕ್ಕು ಕಾಯಿದೆಯ ರೂವಾರಿ...
2000 ದಶಕದ ಆದಿಭಾಗದಲ್ಲಿ, ಹಿಂದಿನ ದುರ್ಬಲ ಮಾಹಿತಿ ಹಕ್ಕು ಕಾಯ್ದೆಯನ್ನು ರದ್ದುಪಡಿಸಿ, ಮತ್ತಷ್ಟು ಬಲಯುತವಾದ ಕಾಯಿದೆಯನ್ನು ಮಹಾರಾಷ್ಟ್ರ ಸರಕಾರವು ಜಾರಿಗೆ ತರುವಂತೆ ಮಾಡುವಲ್ಲಿ ಅಣ್ಣಾ ಹಜಾರೆಯವರ ಹೋರಾಟವೇ ಪ್ರಧಾನ ಪಾತ್ರ ವಹಿಸಿತ್ತು. ಇಂದು ಇದೇ ಮಾಹಿತಿ ಹಕ್ಕು ಕಾಯ್ದೆಯನ್ನು (ಆರ್‌ಟಿಐ) ಕೇಂದ್ರೀಯ ಮಟ್ಟದಲ್ಲಿಯೂ ಜಾರಿಗೊಳಿಸಲಾಗಿ, ಹಲವಾರು ಹಗರಣಗಳು ಹೊರಬರಲು ಕಾರಣವಾಗುತ್ತಿರುವುದು ಸುಳ್ಳೇನಲ್ಲ.

ಗ್ರಾಮವನ್ನು ಬೆಳಗಿದ 'ಪದ್ಮಭೂಷಣ'...
ಮಹಾರಾಷ್ಟ್ರ ಅಹಮದ್‌ನಗರ ಜಿಲ್ಲೆಯ ರಾಲೆಗಣ ಸಿದ್ಧಿ ಎಂಬ ಗ್ರಾಮವನ್ನು ಮದ್ಯ ಮುಕ್ತವಾಗಿ, ಶ್ರಮದಾನದ ಮೂಲಕ ಜನರನ್ನು ಸೇರಿಸಿಕೊಂಡು ಕಾಲುವೆಗಳು, ಸಣ್ಣ ಪುಟ್ಟ ನಾಲೆಗಳು, ನೀರಿನ ಟ್ಯಾಂಕುಗಳು ಮತ್ತು ಶಾಲೆ ಮುಂತಾದವನ್ನು ನಿರ್ಮಿಸಿ, ಅತ್ಯಂತ ಸಮೃದ್ಧವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಿಸಾನ್ ಬಾಪಟ್ ಬಾಬುರಾವ್ ಹಜಾರೆಯವರ ಕೊಡುಗೆ ಪರಿಗಣಿಸಿ ಕೇಂದ್ರ ಸರಕಾರವು ಇದೇ ಹಜಾರೆಗೆ ಪದ್ಮಭೂಷಣ ಪುರಸ್ಕಾರ ನೀಡಿ ಗೌರವಿಸಿತ್ತು.

ಅವರಿಗೆ ಪದ್ಮಭೂಷಣ, 1990ರಲ್ಲಿ ಪದ್ಮಶ್ರೀ, 1986ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ (ಸ್ವತಃ ರಾಜೀವ್ ಗಾಂಧಿ ಕೈಯಿಂದ), ವಿಶ್ವ ಬ್ಯಾಂಕ್ ಪ್ರಶಸ್ತಿ ಮುಂತಾದವುಗಳೆಲ್ಲವೂ ಸಂದಿವೆ.

ಪವರ್‌ಫುಲ್ ಪವಾರ್ ಬೆನ್ನುಬಿದ್ದರು ಹಜಾರೆ...
ಹಾಗಂತ, ಮಹಾರಾಷ್ಟ್ರದ ಬಲಾಢ್ಯ ರಾಜಕಾರಣಿ ಶರದ್ ಪವಾರ್ ಅವರಿಗೆ ಹಜಾರೆ ಕಂಟಕವಾಗುತ್ತಿರುವುದು ಇದೇ ಮೊದಲಲ್ಲ. 1990ರಿಂದಲೂ, ಅಂದು ಕಾಂಗ್ರೆಸ್‌ನಲ್ಲಿದ್ದ ಶರದ್ ಪವಾರ್ ಅವರು ಅಲ್ಪ ಅಂತರದಿಂದ ಅಧಿಕಾರಕ್ಕೆ ಮರಳಿದಾಗ, ಮೊತ್ತ ಮೊದಲು ರಾಜ್ಯದ ಅರಣ್ಯ ಇಲಾಖೆಯ ಭ್ರಷ್ಟಾಚಾರ ವಿರುದ್ಧ ಹೋರಾಟ ಆರಂಭಿಸಿದ್ದರು. ಆರಂಭದಲ್ಲಿ ಪವಾರ್ ನೇರ ಗುರಿಯಾಗಿರಲಿಲ್ಲ. 1993ರಲ್ಲಿ ಪವಾರ್ ಅಧಿಕಾರಕ್ಕೆ ಮರಳಿದಾಗ ಹಜಾರೆ ಭ್ರಷ್ಟಾಚಾರ ವಿರುದ್ಧ ಅವರ ಮೇಲೆ ನೇರ ದಾಳಿ ಪ್ರಾರಂಭಿಸಿಬಿಟ್ಟಿದ್ದರು. ಖೈರ್ನಾರ್ ಎಂಬ ಹೆಸರು ನಿಮಗೆ ನೆನಪಿರಬಹುದು. ಅದೇ ಸಂದರ್ಭದಲ್ಲಿ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿ ಜಿ.ಆರ್.ಖೈರ್ನಾರ್ ಕೂಡ, ಭೂಗತ ಲೋಕದೊಂದಿಗೆ ಪವಾರ್‌ಗೆ ಇರುವ ಸಂಪರ್ಕಗಳ ಕುರಿತು ಸಮರ ಆರಂಭಿಸಿದ್ದರು. ಎನ್ರಾನ್ ವಿದ್ಯುತ್ ಯೋಜನೆ ಕುರಿತಾಗಿ ಬಿಜೆಪಿ-ಶಿವಸೇನೆ ಪಕ್ಷಗಳು ಕೂಡ ಹೋರಾಟ ಆರಂಭಿಸಿದ್ದವು.

ಈ ಹೋರಾಟಗಳು ಪವಾರ್ ಮುಂದಿನ ಬಾರಿ 1995ರಲ್ಲಿ ಅಧಿಕಾರ ಕಳೆದುಕೊಳ್ಳಲು ಕಾರಣವಾಗಿತ್ತು. ನಂತರ ಬಿಜೆಪಿ-ಶಿವಸೇನೆ ಅಧಿಕಾರಕ್ಕೆ ಬಂತು. ಆದರೆ ಆ ಸರಕಾರವೂ ಹಜಾರೆ ದಾಳಿಯಿಂದ ಹೊರತಾಗಿರಲಿಲ್ಲ. ಹಾಗಂತ ಇದೀಗ ಕಾಂಗ್ರೆಸ್ ಆರೋಪಿಸುತ್ತಿರುವಂತೆ ಹಜಾರೆ ಉಪವಾಸದ ಹಿಂದೆ ಬಿಜೆಪಿ-ಸಂಘ ಪರಿವಾರದ ಕೈವಾಡವಿದೆಯೇ? ಇಲ್ಲ ಎನ್ನುತ್ತಾರೆ ಹಜಾರೆ. ಹೋರಾಟದ ಹಾದಿಯಲ್ಲಿ ಸಾಗಿದ್ದ ಹಜಾರೆ ವಿರುದ್ಧ 1998ರಲ್ಲಿ ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿದ್ದ ಬಿಜೆಪಿ-ಶಿವಸೇನೆ ಸರಕಾರವು ಮಾನನಷ್ಟ ಮೊಕದ್ದಮೆ ಹೂಡಿ ಬಂಧಿಸಿತ್ತು ಎಂಬುದನ್ನೂ ಇಲ್ಲಿ ಉಲ್ಲೇಖಿಸಬೇಕು. ಸಮಾಜ ಕಲ್ಯಾಣ ಸಚಿವ ಬಬನ್ ಘೋಲಪ್ ಈ ಮಾನನಷ್ಟ ಕೇಸು ದಾಖಲಿಸಿದ್ದರು. ಸಾಕ್ಷ್ಯಾಧಾರ ದೊರೆಯದೆ ಕೇಸು ಬಿದ್ದು ಹೋಯಿತು, ಘೋಲಪ್ ಅವರಿಗೇ ಮೂರು ತಿಂಗಳು ಜೈಲು ಶಿಕ್ಷೆ ದೊರೆಯಿತು.

ಭ್ರಷ್ಟಾಚಾರ ಆರೋಪದಿಂದಾಗಿ ಇಬ್ಬರು ಸಚಿವರನ್ನು ಕೈಬಿಡಬೇಕಾಗಿ ಬಂದಿತು. ಆದರೆ ತನಿಖಾ ಆಯೋಗ ರಚಿಸಿತಾದರೂ, ಅದಕ್ಕೆ ಹಜಾರೆ ಸೂಚಿಸಿದವರನ್ನು ನೇಮಿಸಲಿಲ್ಲ ಬಿಜೆಪಿ-ಶಿವಸೇನೆ ಸರಕಾರ. ಕೊನೆಗೆ ಈ ಆಯೋಗವು ಸಚಿವರನ್ನು ದೋಷಮುಕ್ತಗೊಳಿಸಿತ್ತು.

ಜೈಲಿಗಟ್ಟಿದರೂ ಜನ ಬೆಂಬಲದಿಂದ ಹೊರಬಂದರು...
1999ರಲ್ಲಿ ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟದಡಿ ಪವಾರ್ ಮತ್ತೆ ಅಧಿಕಾರಕ್ಕೆ ಬಂದಾಗ ಹಜಾರೆ ಅವರ ಬೆನ್ನು ಬಿಡಲಿಲ್ಲ. ಮೂರು ಮಂದಿ ಎನ್‌ಸಿಪಿ ಸಚಿವರ ವಿರುದ್ಧ ತಮ್ಮ ಭ್ರಷ್ಟಾಚಾರದ ಅಸ್ತ್ರವನ್ನು ಪ್ರಯೋಗಿಸಿ, ಸರಕಾರವನ್ನು ನಡುಗಿಸಿದ್ದರು. ಮುಖ್ಯವಾಗಿ ಸರಕಾರಿ ಅಧಿಕಾರಿಗಳ ವರ್ಗಾವಣೆಯಲ್ಲಿನ ಅವ್ಯವಹಾರವಿದು. ಕೊನೆಗೆ ಸುರೇಶ್ ಜೈನ್, ನವಾಬ್ ಮಲಿಕ್ ಮತ್ತು ವಿಜಯ್ ಗವಿಟ್ ಎಂಬ ಮೂವರು ಸಚಿವರು ಪದತ್ಯಾಗ ಮಾಡಬೇಕಾಯಿತು. ಉಪವಾಸ ಸತ್ಯಾಗ್ರಹದಿಂದಾಗಿ ಸರಕಾರವು ವರ್ಗಾವಣೆಗೆ ಹೊಸ ನೀತಿಯೊಂದನ್ನು ಜಾರಿಗೊಳಿಸಬೇಕಾಯಿತು. ಆದರೆ, ಸೇಡು ತೀರಿಸಿಕೊಂಡ ಸರಕಾರ, ಹಜಾರೆ ಅವರು ನಡೆಸುತ್ತಿರುವ ಟ್ರಸ್ಟ್‌ನಲ್ಲೇ ಅವ್ಯವಹಾರ ನಡೆದಿದೆ ಎಂದು ಕೇಸು ಜಡಿಯಿತು. ಹಜಾರೆ ಜೈಲಿಗೂ ಹೋದರು. ಆದರೆ ಜನರ ಒತ್ತಡ ತೀವ್ರವಾದ ಹಿನ್ನೆಲೆಯಲ್ಲಿ ಸರಕಾರವು ಯಾವುದೇ ಷರತ್ತು ಒಡ್ಡದೆ ಅವರನ್ನು ಬಿಡುಗಡೆಗೊಳಿಸಬೇಕಾಯಿತು.

ಇಂಥ ಸನ್ಯಾಸಿಯಂತಹಾ ಜೀವನ ನಡೆಸುತ್ತಿರುವ, ಭ್ರಷ್ಟಾಚಾರ-ವಿರೋಧಿ ಹೋರಾಟ ಎಂದಾಕ್ಷಣೆ ಕಣ್ಣಮುಂದೆ ನೆನಪಾಗುವ ಅಣ್ಣಾ ಹಜಾರೆ ಪ್ರತಿಭಟನೆಗೆ ಇಳಿದರೆಂದರೆ ರಾಜಕಾರಣಿಗಳು ಬೆಚ್ಚಿ ಬೀಳುತ್ತಾರೆ. ದೇಶಾದ್ಯಂತ ಜನಾಂದೋಲನ ಸೃಷ್ಟಿಸಿ ಸರಕಾರವನ್ನು ನಡುಗಿಸುವ ಶಕ್ತಿ ಇರುವ ಏಕೈಕ ವ್ಯಕ್ತಿ ಎಂಬುದನ್ನು ಎಲ್ಲ ರಾಜಕಾರಣಿಗಳೂ ಪಕ್ಷಭೇದವಿಲ್ಲದೆ ಒಪ್ಪಿಕೊಳ್ಳುತ್ತಾರೆ.

ಈಗ ಲೋಕಪಾಲ ಮಸೂದೆಯ ಹೋರಾಟದಲ್ಲಿ ಜಯ ಗಳಿಸದೆ, ಮಹಾರಾಷ್ಟ್ರಕ್ಕೆ ಮರಳುವುದಿಲ್ಲ ಎಂದು ಪಣ ತೊಟ್ಟಿದ್ದಾರೆ ಹಜಾರೆ. 'ನನಗಾಗಿ ರೋದಿಸಲು ನನಗೆ ಯಾವುದೇ ಕುಟುಂಬ ಇಲ್ಲ. ಹೀಗಾಗಿ ಸಾವಿಗೆ ಹೆದರುವುದಿಲ್ಲ. ನನ್ನ ಹತ್ಯೆಗೆ ಮಹಾರಾಷ್ಟ್ರದಲ್ಲಿ ಹಿಂದೊಮ್ಮೆ 35 ಲಕ್ಷ ರೂಪಾಯಿ ಸುಪಾರಿ ಕೊಟ್ಟಿದ್ದರು. ಈಗಿನ ಈ ಯುವ ಜನಾಂಗದವರು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಬೆಂಬಲ ದೊರೆಯುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಬನ್ನಿ, ಗುರಿ ಮುಟ್ಟುವವರೆಗೆ ಹೋರಾಡೋಣ' ಎಂದಿದ್ದಾರೆ ಅಣ್ಣಾ ಹಜಾರೆ. ಟ್ವಿಟ್ಟರ್, ಫೇಸ್‌ಬುಕ್ ಮುಂತಾಗಿ ಆನ್‌ಲೈನ್ ಮಾಧ್ಯಮಗಳಲ್ಲಿಯೂ ಅಣ್ಣಾ ಹಜಾರೆಗೆ ಬೆಂಬಲ ಹೆಚ್ಚುತ್ತಿದೆ. ಸುದ್ದಿ ಚಾನೆಲ್‌ಗಳೆಲ್ಲವೂ ಅಭೂತಪೂರ್ವವಾಗಿ ಬೆಂಬಲಕ್ಕೆ ನಿಂತಿವೆ. ಎಲ್ಲೆಲ್ಲಿಂದಲೂ ಅಣ್ಣಾ ಹಜಾರೆಗೆ ಬೆಂಬಲ ವ್ಯಕ್ತವಾಗುತ್ತಿದೆ. ಜನಾಂದೋಲನವೊಂದು ರೂಪುಗೊಳ್ಳುತ್ತಿದೆ. ಇಂಧದ್ದೊಂದು ಜನಾಂದೋಲನ ಭ್ರಷ್ಟಾಚಾರದಲ್ಲಿ ಮುಳುಗಿ ದೇಶದ, ಜನರ ಅಭಿವೃದ್ಧಿ ಮರೆತ ಸರಕಾರಗಳಿಗೆ ಖಂಡಿತವಾಗಿಯೂ ಕಂಟಕಪ್ರಾಯವಾಗಲಿದೆ. ಈಜಿಪ್ಟ್, ಟ್ಯುನಿಷಿಯಾ, ಸಿರಿಯಾ, ಲಿಬಿಯಾ, ಯೆಮೆನ್, ಗಲ್ಫ್ ರಾಷ್ಟ್ರಗಳಲ್ಲಿ ಜನ ಆಳ್ವಿಕೆಯ ವಿರುದ್ಧ ರೊಚ್ಚಿಗೆದ್ದಿರುವ ದೃಶ್ಯಾವಳಿಗಳು ಕಣ್ಮುಂದೆ ಬರುತ್ತಿದೆ.

ಸ್ವಾತಂತ್ರ್ಯ ಬಂದು 62 ವರ್ಷಗಳಾದರೂ ಭ್ರಷ್ಟಾಚಾರವು ವರ್ಷದಿಂದ ವರ್ಷ ಪೆಡಂಭೂತವಾಗಿ ಬೆಳೆಯುತ್ತಿದೆ. ಸಣ್ಣ ಕೆಲಸವಾಗಬೇಕಿದ್ದರೂ ಲಂಚವಿಲ್ಲದೆ ಕೆಲಸವಾಗುವುದಿಲ್ಲ ಎಂಬ ಪರಿಸ್ಥಿತಿ ಹಲವೆಡೆ ನೋಡುತ್ತಿದ್ದೇವೆ. ಸರಕಾರಗಳು ಕಟ್ಟುನಿಟ್ಟಿನ ಕಾನೂನು ತರಲು ಹಿಂದೇಟು ಹಾಕುತ್ತಿದೆ. ಜನ ಲೋಕಪಾಲ ಮಸೂದೆಯಲ್ಲಿರುವಂತೆ, ಭ್ರಷ್ಟರ ಮೇಲೆ ನೇರವಾಗಿ ಕ್ರಮ ಕೈಗೊಳ್ಳಬಹುದಾಗಿರುವ ಕಾಯಿದೆ ನಮಗೆ ಬೇಕಿದೆ. ಈ ಕುರಿತಾಗಿನ ಅಣ್ಣಾ ಹಜಾರೆಯವರ ಈ ಅಹಿಂಸಾ ಹೋರಾಟವು ಸರಕಾರೀ ಮಟ್ಟದ ಭ್ರಷ್ಟಾಚಾರ ತೊಡೆಯುವಲ್ಲಿ ಪೂರಕವಾಗಲಿ ಎಂಬುದು ನಮ್ಮ ಆಸೆ. ನೀವೇನಂತೀರಿ?

Saturday, March 26, 2011

ಇದರ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ

ಎಲ್ಲೋ ಇದ್ದವರು,
ಮನಸಿಗೆ ಹತ್ತಿರ ಆಗ್ತಾರೆ..
ಕೆಲವರು ಸ್ನೇಹಾನ,
ಕೆಲವರು ಪ್ರೀತಿನ,
ಕೆಲವರು ಖುಷಿನ,
ಇನ್ನು ಕೆಲವರು ನೋವನ್ನು ಕೊಟ್ಟು ಕಣ್ಮರೆ ಆಗ್ತಾರೆ..
ಲೈಫ್ ಇಷ್ಟೇನೆ ಅನ್ಸುತ್ತೆ ಅಲ್ವಾ..?

ಲೈಫ್ ಇಷ್ಟೇನೆ

ಎಲ್ಲೋ ಇದ್ದವರು,
ಮನಸಿಗೆ ಹತ್ತಿರ ಆಗ್ತಾರೆ..
ಕೆಲವರು ಸ್ನೇಹಾನ,
ಕೆಲವರು ಪ್ರೀತಿನ,
ಕೆಲವರು ಖುಷಿನ,
ಇನ್ನು ಕೆಲವರು ನೋವನ್ನು ಕೊಟ್ಟು ಕಣ್ಮರೆ ಆಗ್ತಾರೆ..
ಲೈಫ್ ಇಷ್ಟೇನೆ ಅನ್ಸುತ್ತೆ ಅಲ್ವಾ..?

Thursday, March 24, 2011

ಪ್ರೇಮಿಯ ಮನ

ಹುಡುಕದಿರು ಓ ಮನವೇ
ಕಳೆದು ಹೋದ ಕ್ಷಣಗಳ
ಮರುಗದಿರು ಓ ಮನವೇ
ಮರೆಯಾದ ದಿನಗಳ
ಸಮಯವೇ ಸಂದಿಸುತಿಹುದು ನಿನ್ನ ಅಂಗಳ

ಸೊರಗದಿರು ಓ ಮನವೇ
ಕಾಣದೆ ನಿನ್ನ ಪ್ರೀತಿಯ
ತಲ್ಲಣಿಸದಿರು ಓ ಮನವೇ
ತ್ಯಜಿಸಿ ಹೋದ ಪ್ರೇಮಿಯ
ಓಲವೇ ವರವಾಗಿ ಬರುತಿಹುದು ನಿನ್ನ ಸಂಗಡ

ನನ್ನ ಪ್ರೀತಿಯ ಪರಿ

ಹೃದಯದ ಅಂಚಲಿ ಹೊಮ್ಮಿಸಿದೆ ಪ್ರೀತಿ
ನೀಡು ನಿನ್ನ ಮನದಲ್ಲಿ ನನಗೆ ಅನುಮತಿ
ನಂತರ ಪಡೆಯುವ ಹಿರಿಯರ ಸಮ್ಮತಿ
ಅಂದೇ ಬರೆಯುವ ನನ್ನ ಹೆಸರ ಮುಂದೆ ಶ್ರೀಮತಿ

Sunday, March 20, 2011

ದ್ರಾಕ್ಷಿ

ಬೆಂಗಳೂರಿ ನಲ್ಲಿ ದ್ರಾಕ್ಷಿ
ಚೆನ್ನಾಗಿರುತ್ತದೆ
ಧಾರವಾಡದಲ್ಲಿ
ಚಲೋ ಇರುತ್ತದೆ
ಮೈಸೂರೆ ಗೆ ಬಂದರೆ
WINE ಆಗಿರುತ್ತದೆ !

ಭಾಷೆ

ಎರಡನೆ ಸ್ಥಾನ ಸಾಕು
ಕನ್ನಡ ಭಾಷೆಗೆ
ಮೊದಲನೇ ಸ್ಥಾನ
ಪ್ರಿಯ ನಿನ್ನ
ಕಣ್ಣಿನ ಭಾಷೆಗೆ

Thursday, March 17, 2011

ಭಜನೆ

ರಾಮ ನಾಮ ಅಕ್ಕಿಗೆ
ಕೃಷ್ಣ ನಾಮ ಹೋಯಿಗೆ
ವಿಟ್ಟಲ ನಾಮ ಬೇಳೆಯಲಿ
ರಂಗ ನಾಮ ಕಲ್ಲು ಚೆಲ್ಲಿ
ಪಂಗ ನಾಮ ಹಾಕಿರೋ
ಕೊಂಡು ಮಂಗನಾಗಿ ಬದುಕಿರೋ

ಮದುವೆ

ಪ್ರಾಯದ ಹುಚ್ಹು ಹೊಳೆ
ಎಲೆಲ್ಲೂ ಹರಿದು
ಪೋಲಾಗದಂತೆ
ಹಿರಿಯರು ಕಟ್ಟುವ
ಬದುವೆ
ಈ ಮದುವೆ

ಸತ್ಯ

ಹೇಗಿದೆ ನೋಡಿ
ಭಾರತೀಯರ ಸತ್ಯ ಪ್ರಿಯತೆ
ಕಳ್ಳ ನೊಟೀನಲ್ಲೂ
ಅಚ್ಹಾಗಿರತ್ತೆ
ಸತ್ಯ ಮೇವ ಜಯತೆ !

Wednesday, January 5, 2011

ನಿನಗೆಂದು ಈ ಕವಿತೆ














ರವಿ ನೀನು ಆಗಸದಿಂದ ಮರೆಯಾಗಲು
ನನ್ನ ಬಾಳೂ ಕೂಡ ಮರೆಯಾದಿತು
ನನ್ನ ಜೀವ ಕೂಡ ಕತ್ತಲು
ಮರಳು ಗಾಡಿನಲ್ಲಿ ಬೆಳೆ ಬೆಳೆದಂತೆ ನಾನು ಇಂದು
ನೀನು ಇಲ್ಲದ ಜೀವನ
ಕತ್ತಲೆಯ ರಾತ್ರಿಯಲಿ ನಕ್ಷತ್ರ ವನ್ನು ಎಣಿಸುವಂತೆ

ಜೀವನದ ಅರ್ಥ

ಹವ್ಯಸ ಬದಲಿಸು
ಗುಣ ಬದಲಾದಿತು
ದೃಷ್ಟಿ ಬದಲಿಸು
ದೃಶ್ಯ ಬದಲಾದಿತು
ದೋಣಿ ಬದಲಿಸ ಬೇಕೆಂದಿಲ್ಲ
ದಿಕ್ಕು ಬದಲಿಸಿದರೆ ಸಾಕು
ದಡ ಎದುರದಿತು

ನನ್ನ ಗೆಳೆಯನಿಗೆ ಪ್ರೇಮದ ಕವಿತೆ

ಅಡುಗೆ ಮಾಡಲು ಬೇಕು ಸ್ತವ್ವು
ನಾನು ನಿನ್ನ ಮಾಡ್ತೀನಿ ಲವ್ವು
ನಾಯಿ ಬೊಗಳುತ್ತವೆ ಬೌ ಬೌ
ನನ್ನ ಹೃದಯ ಬಡಿತವೆ ಡವ್ ಡವ್

ಹೊಸವರುಷ

ಬಾ ಪ್ರಿಯೆ ನಗು ನಗುತಾ ಸ್ವಾಗತಿಸೋಣ
ಹೊಸ ವರುಷವನು ಮರೆತುಬಿಡೋಣ
ಎಲ್ಲಾ ಅನಿಸ್ಟಗಳನು
ಆಗ ಅವಳು ಅಂದಳು ನ ಹೇಗೆ ಮರೆಯಲಿ ನಿಮ್ಮನ್ನು